ಜಿಲ್ಲಾ ನ್ಯಾಯಾಲಯದ ಬಗ್ಗೆ
ಜಿಲ್ಲೆಯ ಕುರಿತು.
ಹಾಸನ ಜಿಲ್ಲೆಯು ಭಾರತದಲ್ಲಿ ಕರ್ನಾಟಕ ರಾಜ್ಯದ 30 ಜಿಲ್ಲೆಗಳ ಪೈಕಿ ಕರ್ನಾಟಕದ ನೈರುತ್ಯ ದಿಕ್ಕಿನಲ್ಲಿರುವ ಒಂದು ಜಿಲ್ಲೆ. ಜಿಲ್ಲೆಯು ಶ್ರೀಮಂತ ಇತಿಹಾಸದಿಂದ ಹಾಗೂ ಸ್ಮರಣೀಯ ಘಟನೆಗಳಿಂದ ಕೂಡಿದೆ. ಬೇಲೂರು ತಾಲ್ಲೂಕಿನ ಈಗಿನ ಹಳೇಬೀಡಾಗಿರುವ ಹಿಂದಿನ ದ್ವಾರಸಮುದ್ರವನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಹೊಯ್ಸಳ ಚಕ್ರವರ್ತಿಗಳ ಅಧಿಕಾರಾವಧಿಯಲ್ಲಿ ಈ ಜಿಲ್ಲೆಯು ತನ್ನ ವೈಭವದ ಉತ್ತುಂಗವನ್ನು ತಲುಪಿತ್ತು. ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಜಿಲ್ಲೆಯು ಬೇಲೂರು ಮತ್ತು ಹಳೇಬೀಡಿನಲ್ಲಿರುವಂತಹ ಹೊಯ್ಸಳ ಶೈಲಿಯ ವಾಸ್ತು ಹಾಗೂ ಶಿಲ್ಪಕಲೆಯ ತವರಾಗಿದೆ. ಜೈನಸ್ಮಾರಕಗಳಿಂದ ಕೂಡಿರುವ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳವು ಜೈನರ ಸುಪ್ರಸಿದ್ಧ ಯಾತ್ರಾಸ್ಥಳವಾಗಿದೆ
ಹೆಸರಿನ ಮೂಲ
ರಾಜ್ಯದ ಬಹಳಷ್ಟು ಜಿಲ್ಲೆಗಳಂತೆಯೇ ಈ ಜಿಲ್ಲೆಯೂ ತನ್ನ ಕೇಂದ್ರ ಕಾರ್ಯಸ್ಥಾನದ ಪಟ್ಟಣ “ಹಾಸನ” ಹೆಸರಿನಿಂದಲೇ ಕರೆಯಲ್ಪಡುತ್ತಿದೆ. ಸ್ಥಳಪುರಾಣದ ಪ್ರಕಾರ “ಹಾಸನ”ವು ”ಸಿಂಹಾಸನಪುರ”ದ ಸಂಕ್ಷಿಪ್ತನಾಮ. ಪಾಂಡವರ ಪೈಕಿ ಅರ್ಜುನನ ಮರಿಮೊಮ್ಮಗನಾದ ಜನಮೇಜಯನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ ಬಹಳ ಜನಗಳ ನಂಬಿಕೆಯ ಪ್ರಕಾರ ಇಲ್ಲಿಯ ಆದಿದೇವತೆಯಾದ ಹಾಸನಮ್ಮ ಅಥವಾ ಹಾಸನಾಂಬೆ ಅಂದರೆ ಕನ್ನಡದಲ್ಲಿ ‘ನಗೆಮೊಗದ’ (ಹಸನ್ಮುಖಿ) ತಾಯಿ ಅಥವಾ ದೇವತೆಯಿಂದ “ಹಾಸನ” ಎಂಬ ಹೆಸರು ಬಂದಿದೆ. ಈ ಸಂದರ್ಭದಲ್ಲಿ ದೇವತೆ ಹಾಸನಾಂಬೆಯು ಈ ಸ್ಥಳಕ್ಕೆ ಹೇಗೆ ಬಂದಳೆನ್ನುವುದಕ್ಕೆ ಒಂದು ಸಾಂಪ್ರದಾಯಿಕ ಕಥೆ ಇಂತಿದೆ – ಒಮ್ಮೆ ಸಪ್ತ ಮಾತೃಕೆಯರು ವಾರಣಾಸಿ (ಕಾಶಿ) ಯಿಂದ ದಕ್ಷಿಣ ದಿಕ್ಕಿಗೆ ಪ್ರಯಾಣಿಸುತ್ತಿರುವಾಗ, ಈ ಪ್ರದೇಶದ ರಮಣೀಯತೆಗೆ ಮಾರುಹೋಗಿ ಇಲ್ಲೇ ನೆಲೆಸುವ ನಿರ್ಧಾರ ಮಾಡಿದರು. ಆ ಪ್ರಕಾರ, ಸಹೋದರಿಯರಾದ ಸಪ್ತಮಾತೃಕೆಯರಲ್ಲಿ ಮೂವರು ಹಾಸನದಲ್ಲಿ ನೆಲೆಸಿದರು. ಇನ್ನು ಮೂವರು ಹಾಸನ ನಗರದಲ್ಲೇ ಇರುವ ದೇವಿಗೆರೆ (ಕೆರೆ)ಯಲ್ಲಿ ನೆಲೆಸಿದರು. ಅವರನ್ನು ಹಾಸನಾಂಬಾ ಎಂದು ಕರೆಯಲಾಗುತ್ತದೆ. ಇನ್ನೊಬ್ಬರು ಕೆಂಚಾಂಬಾ ಎಂಬ ಹೆಸರಿನಿಂದ, ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಎಂಬಲ್ಲಿ ಅರಣ್ಯದಲ್ಲಿ ನೆಲೆಸಿದರು.
ಹಾಸನ ಜಿಲ್ಲೆಯ ಭೌಗೋಳಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆ
ಭೂಗೋಳ: – ಉತ್ತರ ಅಕ್ಷಾಂಶ 12⁰ 13’ ಮತ್ತು 13⁰ 33’ ನಡುವೆ ಹಾಗೂ ಪೂರ್ವ ರೇಖಾಂಶ 75⁰ 33’ ಮತ್ತು 76⁰ 38’ಗಳ[...]
ಮತ್ತಷ್ಟು ಓದು- 29.04.2024 ರಿಂದ 25.05.2024 ವರೆಗೆ ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಂಗ ಅಧಿಕಾರಿಗಳ 2024 ರ ಬೇಸಿಗೆ ರಜೆಯ ಏಕೀಕೃತ ಹೇಳಿಕೆ
- ಜಿಲ್ಲಾ ನ್ಯಾಯಾಲಯಗಳಿಗೆ ರಜೆಯ ನ್ಯಾಯಾಧೀಶರ ನೇಮಕಾತಿ
- ಕೌಟುಂಬಿಕ ನ್ಯಾಯಾಲಯಗಳಿಗೆ ರಜೆಯ ನ್ಯಾಯಾಧೀಶರ ನೇಮಕಾತಿ
- ಕ್ರಿಮಿನಲ್ ಮೇಲ್ಮನವಿ ನ್ಯಾಯವ್ಯಾಪ್ತಿ ಕ್ರಿಮಿನಲ್ ಮೇಲ್ಮನವಿ ಸಂಖ್ಯೆ. 730/2020 (Slp (Crl.) ಸಂಖ್ಯೆ 9503 ರ 2018 ರಿಂದ ಉದ್ಭವಿಸುತ್ತದೆ)
- 2020 ರ ಕ್ರಿಮಿನಲ್ ಮೇಲ್ಮನವಿ ಸಂಖ್ಯೆ 730 ರಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶ
- ಕರ್ನಾಟಕದ ಹೈಕೋರ್ಟ್ ಮತ್ತು ರಾಜ್ಯದ ಜಿಲ್ಲಾ ನ್ಯಾಯಾಂಗದಲ್ಲಿ ಇ-ಫೈಲಿಂಗ್ 3.0 ನ ಹೊಸ ಆವೃತ್ತಿಯನ್ನು ಹೊರತರಲಾಗಿದೆ
- ಇ ಪಾವತಿ ಅಧಿಸೂಚನೆ -ಹಾಸನ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇ-ಪಾವತಿ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದೆ
- ಅಧಿಸೂಚನೆ ಸಂಖ್ಯೆಃ ಆಡಳಿತ/2/2023 ದಿನಾಂಕ:26.08.2023-ಜವಾನರು ಹುದ್ದೆಗೆ ನೇಮಕಾತಿ
- ವಿಶೇಷ ಲೋಕ ಅದಾಲತ್ 29-07-2024 ರಿಂದ 03-08-2024 ರವರೆಗೆ ಕುರಿತು ಕರಪತ್ರ
- ಕರ್ನಾಟಕ ಉಚ್ಛ ನ್ಯಾಯಾಲಯದ ಸುತ್ತೋಲೆ- ಎಲ್ ಆರ್ ಸಿ 09/ಕೌನ್ಸಿಲ್ ಮೀಟಿಂಗ್/2015 ದಿನಾಂಕ 24.02.2024
- ದಿನಾಂಕಃ 31.12.2023 ಕ್ಕೆ ಅನ್ವಯವಾಗುವಂತೆ ಹಾಸನ ಜಿಲ್ಲಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ನೌಕರರ ಅಂತಿಮ ಜ್ಯೇಷ್ಠತಾ ಪಟ್ಟಿ
- ಪಿಒಎಸ್ಎಚ್ ಆಕ್ಟ್ ಅಡಿಯಲ್ಲಿ ಐಸಿಸಿ
- ಡಿಸ್ಟ್ರಿಕ್ಟ್ ಕೋರ್ಟ್ ಆಕ್ಸೆಸ್ಎಬಿಲಿಟಿ ಕಮಿಟಿ
- ಜಿಲ್ಲಾ ಮಟ್ಟದ ಆಂತರಿಕ ದೂರು ಸಮಿತಿ
- ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಬಂದಿರುವ ದೂರುಗಳ ಬಗ್ಗೆ ಸುತ್ತೋಲೆ
ತ್ವರಿತ ಲಿಂಕ್ಗಳು
ಇಕೋರ್ಟ್ ಸೇವೆಗಳು
ಪ್ರಕರಣದ ಸ್ಥಿತಿ
ಪ್ರಕರಣದ ಸ್ಥಿತಿ
ನ್ಯಾಯಾಲಯದ ಆದೇಶ
ನ್ಯಾಯಾಲಯದ ಆದೇಶ
ವ್ಯಾಜ್ಯಗಳ ಪಟ್ಟಿ
ವ್ಯಾಜ್ಯಗಳ ಪಟ್ಟಿ
ಕೇವಿಯೇಟ್ ಹುಡುಕಾಟ
ಕೇವಿಯೇಟ್ ಹುಡುಕಾಟ
ಪ್ರಮುಖ ಲಿಂಕ್ಗಳು
ಇತ್ತೀಚಿನ ಪ್ರಕಟಣೆಗಳು
- ವಿಶೇಷ ಲೋಕ ಅದಾಲತ್ 29-07-2024 ರಿಂದ 03-08-2024 ರವರೆಗೆ ಕುರಿತು ಕರಪತ್ರ
- 29.04.2024 ರಿಂದ 25.05.2024 ವರೆಗೆ ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಂಗ ಅಧಿಕಾರಿಗಳ 2024 ರ ಬೇಸಿಗೆ ರಜೆಯ ಏಕೀಕೃತ ಹೇಳಿಕೆ
- ಜಿಲ್ಲಾ ನ್ಯಾಯಾಲಯಗಳಿಗೆ ರಜೆಯ ನ್ಯಾಯಾಧೀಶರ ನೇಮಕಾತಿ
- ಕೌಟುಂಬಿಕ ನ್ಯಾಯಾಲಯಗಳಿಗೆ ರಜೆಯ ನ್ಯಾಯಾಧೀಶರ ನೇಮಕಾತಿ
- ಕರ್ನಾಟಕ ಉಚ್ಛ ನ್ಯಾಯಾಲಯದ ಸುತ್ತೋಲೆ- ಎಲ್ ಆರ್ ಸಿ 09/ಕೌನ್ಸಿಲ್ ಮೀಟಿಂಗ್/2015 ದಿನಾಂಕ 24.02.2024