ಮುಕ್ತಾಯ ಮಾಡು

    ಇತಿಹಾಸ

    ಜಿಲ್ಲೆಯ ಕುರಿತು.

    ಹಾಸನ ಜಿಲ್ಲೆಯು ಭಾರತದಲ್ಲಿ ಕರ್ನಾಟಕ ರಾಜ್ಯದ 30 ಜಿಲ್ಲೆಗಳ ಪೈಕಿ ಕರ್ನಾಟಕದ ನೈರುತ್ಯ ದಿಕ್ಕಿನಲ್ಲಿರುವ ಒಂದು ಜಿಲ್ಲೆ. ಜಿಲ್ಲೆಯು ಶ್ರೀಮಂತ ಇತಿಹಾಸದಿಂದ ಹಾಗೂ ಸ್ಮರಣೀಯ ಘಟನೆಗಳಿಂದ ಕೂಡಿದೆ. ಬೇಲೂರು ತಾಲ್ಲೂಕಿನ ಈಗಿನ ಹಳೇಬೀಡಾಗಿರುವ ಹಿಂದಿನ ದ್ವಾರಸಮುದ್ರವನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಹೊಯ್ಸಳ ಚಕ್ರವರ್ತಿಗಳ ಅಧಿಕಾರಾವಧಿಯಲ್ಲಿ ಈ ಜಿಲ್ಲೆಯು ತನ್ನ ವೈಭವದ ಉತ್ತುಂಗವನ್ನು ತಲುಪಿತ್ತು. ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಜಿಲ್ಲೆಯು ಬೇಲೂರು ಮತ್ತು ಹಳೇಬೀಡಿನಲ್ಲಿರುವಂತಹ ಹೊಯ್ಸಳ ಶೈಲಿಯ ವಾಸ್ತು ಹಾಗೂ ಶಿಲ್ಪಕಲೆಯ ತವರಾಗಿದೆ. ಜೈನಸ್ಮಾರಕಗಳಿಂದ ಕೂಡಿರುವ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳವು ಜೈನರ ಸುಪ್ರಸಿದ್ಧ ಯಾತ್ರಾಸ್ಥಳವಾಗಿದೆ

    ಹೆಸರಿನ ಮೂಲ

    ರಾಜ್ಯದ ಬಹಳಷ್ಟು ಜಿಲ್ಲೆಗಳಂತೆಯೇ ಈ ಜಿಲ್ಲೆಯೂ ತನ್ನ ಕೇಂದ್ರ ಕಾರ್ಯಸ್ಥಾನದ ಪಟ್ಟಣ “ಹಾಸನ” ಹೆಸರಿನಿಂದಲೇ ಕರೆಯಲ್ಪಡುತ್ತಿದೆ. ಸ್ಥಳಪುರಾಣದ ಪ್ರಕಾರ “ಹಾಸನ”ವು ”ಸಿಂಹಾಸನಪುರ”ದ ಸಂಕ್ಷಿಪ್ತನಾಮ. ಪಾಂಡವರ ಪೈಕಿ ಅರ್ಜುನನ ಮರಿಮೊಮ್ಮಗನಾದ ಜನಮೇಜಯನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ ಬಹಳ ಜನಗಳ ನಂಬಿಕೆಯ ಪ್ರಕಾರ ಇಲ್ಲಿಯ ಆದಿದೇವತೆಯಾದ ಹಾಸನಮ್ಮ ಅಥವಾ ಹಾಸನಾಂಬೆ ಅಂದರೆ ಕನ್ನಡದಲ್ಲಿ ‘ನಗೆಮೊಗದ’ (ಹಸನ್ಮುಖಿ) ತಾಯಿ ಅಥವಾ ದೇವತೆಯಿಂದ “ಹಾಸನ” ಎಂಬ ಹೆಸರು ಬಂದಿದೆ. ಈ ಸಂದರ್ಭದಲ್ಲಿ ದೇವತೆ ಹಾಸನಾಂಬೆಯು ಈ ಸ್ಥಳಕ್ಕೆ ಹೇಗೆ ಬಂದಳೆನ್ನುವುದಕ್ಕೆ ಒಂದು ಸಾಂಪ್ರದಾಯಿಕ ಕಥೆ ಇಂತಿದೆ – ಒಮ್ಮೆ ಸಪ್ತ ಮಾತೃಕೆಯರು ವಾರಣಾಸಿ (ಕಾಶಿ) ಯಿಂದ ದಕ್ಷಿಣ ದಿಕ್ಕಿಗೆ ಪ್ರಯಾಣಿಸುತ್ತಿರುವಾಗ, ಈ ಪ್ರದೇಶದ ರಮಣೀಯತೆಗೆ ಮಾರುಹೋಗಿ ಇಲ್ಲೇ ನೆಲೆಸುವ ನಿರ್ಧಾರ ಮಾಡಿದರು. ಆ ಪ್ರಕಾರ, ಸಹೋದರಿಯರಾದ ಸಪ್ತಮಾತೃಕೆಯರಲ್ಲಿ ಮೂವರು ಹಾಸನದಲ್ಲಿ ನೆಲೆಸಿದರು. ಇನ್ನು ಮೂವರು ಹಾಸನ ನಗರದಲ್ಲೇ ಇರುವ ದೇವಿಗೆರೆ (ಕೆರೆ)ಯಲ್ಲಿ ನೆಲೆಸಿದರು. ಅವರನ್ನು ಹಾಸನಾಂಬಾ ಎಂದು ಕರೆಯಲಾಗುತ್ತದೆ. ಇನ್ನೊಬ್ಬರು ಕೆಂಚಾಂಬಾ ಎಂಬ ಹೆಸರಿನಿಂದ, ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಎಂಬಲ್ಲಿ ಅರಣ್ಯದಲ್ಲಿ ನೆಲೆಸಿದರು.

    ಹಾಸನ ಜಿಲ್ಲೆಯ ಭೌಗೋಳಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆ

    ಭೂಗೋಳ: – ಉತ್ತರ ಅಕ್ಷಾಂಶ 12⁰ 13’ ಮತ್ತು 13⁰ 33’ ನಡುವೆ ಹಾಗೂ ಪೂರ್ವ ರೇಖಾಂಶ 75⁰ 33’ ಮತ್ತು 76⁰ 38’ಗಳ ನಡುವೆ ಇರುವ ಹಾಸನ ಜಿಲ್ಲೆಯು ಒಟ್ಟು 6826.15 ಚದರ ಕಿಲೋಮೀಟರ್ ವಿಸ್ತೀರ್ಣವಿದೆ. ಜಿಲ್ಲೆಯ ಅತ್ಯಧಿಕ ಉದ್ದ ದಕ್ಷಿಣದಿಂದ ಉತ್ತರಕ್ಕೆ 129 ಕಿ.ಮೀ ಹಾಗೂ ಅತ್ಯಧಿಕ ಅಗಲ ಪೂರ್ವದಿಂದ ಪಶ್ಚಿಮಕ್ಕೆ 116 ಕಿ.ಮೀ.ಗಳು. ಜಿಲ್ಲೆಯು ಒಟ್ಟು 8 ತಾಲ್ಲೂಕುಗಳನ್ನು, 38 ಹೋಬಳಿಗಳನ್ನು ಹಾಗೂ 2369 ಗ್ರಾಮಗಳನ್ನು ಹೊಂದಿದೆ. ಹಾಸನ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 6845 ಚದರ ಕಿ.ಮೀ.ಗಳು. ಇಲ್ಲಿನ ಜನಸಂಖ್ಯೆ 15.67 ಲಕ್ಷ ಮತ್ತು ಸರಾಸರಿ ಮಳೆ ವಾರ್ಷಿಕ 1031 ಮಿ.ಮಿ.ಗಳು. ಕಾಫಿ, ಕರಿಮೆಣಸು, ಆಲೂಗೆಡ್ಡೆ, ಭತ್ತ ಮತ್ತು ಕಬ್ಬು ಇಲ್ಲಿನ ಪ್ರಮುಖ ಬೆಳೆಗಳು. ಹಾಸನ ಜಿಲ್ಲೆಯು ಭಾಗಶಃ ಮಲೆನಾಡು ಹಾಗೂ ಭಾಗಶಃ ಬಯಲುಸೀಮೆಯ ಭಾಗಗಳನ್ನು ಹೊಂದಿದೆ. ಭೌಗೋಳಿಕ ಅಂಶಗಳು, ವಾತಾವರಣ, ಮಳೆ, ಇತ್ಯಾದಿ ಅಂಶಗಳನ್ನು ಗಮನಿಸಿದಾಗ ಈ ಜಿಲ್ಲೆಯನ್ನು (1) ದಕ್ಷಿಣ ಮಲೆನಾಡು, (2) ಅರೆಮಲೆನಾಡು ಮತ್ತು (3) ದಕ್ಷಿಣ ಬಯಲು ಸೀಮೆ ಎಂದು ಮೂರು ಪ್ರದೇಶಗಳಾಗಿ ವಿಂಗಡಿಸಬಹುದು. ಬೇಲೂರು ತಾಲ್ಲೂಕಿನ ಪಶ್ಚಿಮ ಮತ್ತು ಪೂರ್ವೋತ್ತರ ಭಾಗಗಳು, ಆಲೂರು ತಾಲ್ಲೂಕಿನ ಪಶ್ಚಿಮ ಮತ್ತು ಮಧ್ಯ ಪ್ರದೇಶಗಳು, ಮತ್ತು ಸಕಲೇಶಪುರ ತಾಲ್ಲೂಕಿನ ಸಂಪೂರ್ಣ ಭೂ ಪ್ರದೇಶ, ದಕ್ಷಿಣ ಮಲೆನಾಡು ಆಗುತ್ತದೆ. ಅರಕಲಗೂಡು ತಾಲ್ಲೂಕಿನ ಮಧ್ಯಭಾಗಗಳು, ಹಾಸನ ತಾಲ್ಲೂಕಿನ ಪಶ್ಚಿಮ ಭಾಗ, ಆಲೂರು ತಾಲ್ಲೂಕಿನ ಪೂರ್ವ ಭಾಗ, ಬೇಲೂರು ತಾಲ್ಲೂಕಿನ ಮಧ್ಯ ಹಾಗೂ ಪೂರ್ವ ಭಾಗಗಳು ಮತ್ತು ಅರಸೀಕೆರೆ ತಾಲ್ಲೂಕಿನ ಪಶ್ಚಿಮ ಭಾಗಗಳು “ಅರೆಮಲೆನಾಡು” ಪ್ರದೇಶ ಆಗುತ್ತವೆ. ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳನ್ನು ಸಂಪೂರ್ಣವಾಗಿ, ಅರಸೀಕೆರೆ ಮತ್ತು ಹಾಸನ ತಾಲ್ಲೂಕುಗಳ ಪೂರ್ವ ಭಾಗಗಳು ಮತ್ತು ಅರಕಲಗೂಡು ತಾಲ್ಲೂಕಿನ ಆಗ್ನೇಯ ಭಾಗಗಳು ದಕ್ಷಿಣದ ಬಯಲು ಪ್ರದೇಶವಾಗುತ್ತವೆ. ದಕ್ಷಿಣದ ಮಲೆನಾಡು ಭಾಗವು ದಟ್ಟ ಅರಣ್ಯದಿಂದ ಬೆಟ್ಟಗುಡ್ಡಗಳಿಂದ ಕೂಡಿದ್ದು, ಭಾರೀ ಮಳೆಯ ಪ್ರದೇಶವಾಗಿದೆ.

    ಹಾಸನ ಜಿಲ್ಲೆಯ ನ್ಯಾಯಾಲಯಗಳ ಕುರಿತು

    ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಉದ್ಭವಿಸುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳೆರಡನ್ನೂ ನಿರ್ಧರಿಸುವ ಅಧಿಕಾರವನ್ನು ಜಿಲ್ಲಾ ನ್ಯಾಯಾಲಯಕ್ಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧೀನ ನ್ಯಾಯಾಲಯಗಳ ಎಲ್ಲಾ ಸಿಬ್ಬಂದಿಯ ಮೇಲೆ ಜಿಲ್ಲಾ ನ್ಯಾಯಾಲಯವು ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿದೆ. ಜಿಲ್ಲಾ ನ್ಯಾಯಾಲಯದಲ್ಲಿ ಅಥವಾ ಜಿಲ್ಲೆಯ ಯಾವುದೇ ನ್ಯಾಯಾಲಯದಲ್ಲಿ ಬಾಕಿ ಇರುವ ಮೊಕದ್ದಮೆಗಳು, ಮೇಲ್ಮನವಿಗಳು ಅಥವಾ ಇತರ ಪ್ರಕ್ರಿಯೆಗಳನ್ನು ಹಿಂಪಡೆಯಲು ಮತ್ತು ವರ್ಗಾಯಿಸಲು ಜಿಲ್ಲಾ ನ್ಯಾಯಾಲಯವು ಅಧಿಕಾರವನ್ನು ಹೊಂದಿದೆ.

    27.09.1965 ರಂದು G.O. No. LAW 135 CAD 63 (VIII) ರಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಾಸನವನ್ನು ಸ್ಥಾಪಿಸಲಾಗಿದೆ ಮತ್ತು 01.11.1965 ರಿಂದ ಜಾರಿಗೆ ಬರುವಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.

    ತಾಲೂಕುಗಳ ಸಂಖ್ಯೆ

    ಹಾಸನ ಜಿಲ್ಲೆ ಎಂಟು (8) ತಾಲ್ಲೂಕುಗಳನ್ನು ಒಳಗೊಂಡಿದೆ, ಹಾಸನ, ಆಲೂರು, ಅರಸೀಕೆರೆ, ಅರಕಲಗೂಡು, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ.

    ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಲಯಗಳ ಪಟ್ಟಿ

    1. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾಸನ
    2. I ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾಸನ
    3. II ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾಸನ
    4. III ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾಸನ
    5. IV ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾಸನ (ಪೀಠಾಸೀನ ಚನ್ನರಾಯಪಟ್ಟಣ)
    6. V ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾಸನ
    7. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು-ಎಫ್ ಟಿ ಎಸ್ ಸಿ-I, ಹಾಸನ
    8. ಕೌಟುಂಬಿಕ ನ್ಯಾಯಾಲಯ, ಹಾಸನ
    9. ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ, ಹಾಸನ
    10. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ, ಹಾಸನ
    11. I ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಹಾಸನ
    12. II ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಹಾಸನ
    13. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಹಾಸನ
    14. I ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಹಾಸನ
    15. II ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಹಾಸನ
    16. III ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಹಾಸನ
    17. IV ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಹಾಸನ
    18. V ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಹಾಸನ
    19. VI ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಹಾಸನ
    20. VII ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಹಾಸನ
    21. ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಆಲೂರು
    22. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಅರಕಲಗೂಡು
    23. ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಅರಕಲಗೂಡು
    24. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಅರಕಲಗೂಡು
    25. II ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಅರಕಲಗೂಡು
    26. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಅರಸೀಕೆರೆ
    27. ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಅರಸೀಕೆರೆ
    28. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಅರಸೀಕೆರೆ
    29. II ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಅರಸೀಕೆರೆ
    30. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮತ್ತು ಜೆ ಎಂ ಎಫ್ ಸಿ, ಬೇಲೂರು
    31. ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಬೇಲೂರು
    32. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಚನ್ನರಾಯಪಟ್ಟಣ
    33. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ ನ್ಯಾಯಾಲಯ, ಚನ್ನರಾಯಪಟ್ಟಣ
    34. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಚನ್ನರಾಯಪಟ್ಟಣ
    35. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಚನ್ನರಾಯಪಟ್ಟಣ
    36. II ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತುಜೆ ಎಂ ಎಫ್ ಸಿ, ಚನ್ನರಾಯಪಟ್ಟಣ
    37. III ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಚನ್ನರಾಯಪಟ್ಟಣ
    38. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಹೊಳೆನರಸೀಪುರ
    39. ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಹೊಳೆನರಸೀಪುರ
    40. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಹೊಳೆನರಸೀಪುರ
    41. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಸಕಲೇಶಪುರ
    42. ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಸಕಲೇಶಪುರ
    43. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್‌ ಸಿ, ಸಕಲೇಶಪುರ

    ಮೂಲಸೌಕರ್ಯ

    1. ಕಂಪ್ಯೂಟರ್ ಸರ್ವರ್ ಕೊಠಡಿ
    2. ನ್ಯಾಯಿಕ ಸೇವಾ ಕೇಂದ್ರ
    3. ಇ ಸೇವಾ ಕೇಂದ್ರ
    4. ವಿಡಿಯೋ ಕಾನ್ಫರೆನ್ಸ್ ಹಾಲ್
    5. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ
    6. ಮಧ್ಯಸ್ಥಿಕೆ ಕೇಂದ್ರ
    7. ಕಾನೂನು ನೆರವು ಕ್ಲಿನಿಕ್
    8. ಕಿಯೋಸ್ಕ್ ಸೌಲಭ್ಯ